ಇಂದುಮತಿ

1. ವಿದರ್ಭದ ಭೋಜರಾಜನ ಮಗಳು. ಕಾಕುತ್ಸ್ಯವಂಶದ ಅಜನನ್ನು ಮದುವೆಯಾಗಿ ದಶರಥನನ್ನು ಪಡೆದಳು. ತೃಣಬಿಂದುವೆಂಬ ರಾಜನ ತಪೋಭಂಗ ಮಾಡಲೆಂದು ಹೋದ ಹರಿಣಿಯೆಂಬ ಅಪ್ಸರೆ ಅವನ ಶಾಪದಿಂದ ವಿದರ್ಭದ ರಾಜಮನೆತನದಲ್ಲಿ ಜನಿಸಿದಳೆಂದೂ ಆಖ್ಯಾಯಿಕೆಯಿದೆ. ನಾರದನ ವೀಣೆಯ ಮೇಲಣ ಹೂಮಾಲೆ ಇವಳ ಮೇಲೆ ಬಿದ್ದುದರಿಂದ ಸತ್ತಳು.

2. ಚಂದ್ರವಂಶದ ಆಯುರಾಜನ ಹೆಂಡತಿ ಸ್ವರ್ಭಾನವಿಯ ನಾಮಾಂತರ.

3. ಸಿಂಹಳ ದ್ವೀಪದ ಅರಸ ಚಂದ್ರಸೇನನ ಕಿರಿಯ ಮಗಳು. ಮದ್ರದೇಶದ ರಾಜಪುತ್ರ ಚಾರುದೇಷ್ಣನ ಪತ್ನಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ